Vasuki Vaibhav
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಇನ್ನೂನು ಬೇಕಾಗಿದೆಒಲವು ಇನ್ನೂನು ಬೇಕಾಗಿದೆ
ಸೋಕಿ ನಿನ್ನಾ ಮೌನ ತಂಗಾಳೀನು ಹಾಡಾಗಿದೆ
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ
ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು
ನಿನ್ನುಸಿರ ಧ್ಯಾನಿಸುವ ತೀರಾ ಸಾಮಾನ್ಯ ನಾನು
ಆಕಾಶದಲ್ಲಿ ನೀ ದೀಪವಾದೆ
ಇರುಳಾಗಿ ನಾನು ನಿನಗಾಗಿ ಕಾದೆ
ಈ ಮೌನಕ್ಕೀಗ ಮಾಧುರ್ಯವಾದೆ
ಹೊರತಾಗಿ ನಿನ್ನ ನಾ ಖಾಲಿಯಾದೆ
ಸಿಹಿ ಕಹಿ ಏನಾದರೂ
ಪ್ರತಿ ಕ್ಷಣ ಜೊತೆಯಾಗಿರು
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ
ಸೋಕಿ ನಿನ್ನಾ ಮೌನ ತಂಗಾಳೀನು ಹಾಡಾಗಿದೆ
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ